ಫೀಜಿ
ದಕ್ಷಿಣ ಫೆಸಿಫಿಕ್ ಸಾಗರದ ನೈಋತ್ಯದಲ್ಲಿರುವ ದ್ವೀಪಸ್ತೋಮ. ನ್ಯೂಜಿûಲೆಂಡಿನ ಆಕ್‍ಲೆಂಡಿಗೆ ಉತ್ತರದಲ್ಲಿ 2,100 ಕಿಮೀ. ದೂರದಲ್ಲಿ ಹರಡಿರುವ ಈ ದ್ವೀಪಸ್ತೋಮದ ಒಟ್ಟು ವಿಸ್ತೀರ್ಣ 18,274 ಚ.ಕಿಮೀ. ಜನಸಂಖ್ಯೆ 663,000 (1980). ಮುಖ್ಯ ಆಡಳಿತ ಕೇಂದ್ರ ಸೂವ. 

	ಫೀಜಿ ದ್ವೀಪಸ್ತೋಮದಲ್ಲಿ ಸಣ್ಣ ಪುಟ್ಟ ದ್ವೀಪಗಳನ್ನೆಲ್ಲ ಸೇರಿಸಿ ಒಟ್ಟು 844 ದ್ವೀಪಗಳಿವೆ. ಇವುಗಳ ಪೈಕಿ ಸುಮಾರು 100 ದ್ವೀಪಗಳಲ್ಲಿ ಮಾತ್ರ ಜನವಸತಿಯಿದೆ. ಈ ದ್ವೀಪಸ್ತೋಮ ನ್ಯೂ ಹೆಬ್ರಡೀeóï ದ್ವೀಪಗಳ ಪೂರ್ವದಲ್ಲೂ ಸಮೋ ಆ ದ್ವೀಪಗಳ ನೈಋತ್ಯದಲ್ಲೂ ಇದ್ದು ದಕ್ಷಿಣ ಅಕ್ಷಾಂಶ 16ಲಿ-19ಲಿ 20' ಮತ್ತು ಪಶ್ಚಿಮ ರೇಖಾಂಶ 178ಲಿ ಯಿಂದ ಪೂರ್ವ ರೇಖಾಂಶ 177ಲಿ ವರೆಗೆ ಹರಡಿದೆ. ಫೀಜಿ ದ್ವೀಪಸ್ತೋಮದ ಎರಡು ದೊಡ್ಡ ದ್ವೀಪಗಳಲ್ಲಿ ವೀಟೇಲೆವು 10,385 ಚ.ಕಿಮೀ. ವಿಸ್ತೀರ್ಣವುಳ್ಳದ್ದು. ಎರಡನೆಯದು ವನೂವ ಲೆವು 5,535 ಚ.ಕಿಮೀ. ವಿಸ್ತೀರ್ಣವಿದೆ. ಟವೇಯಾನಿ, ಕಾಂಡಾವೂ, ಕೊರೊ, ಎನ್ಗೂ, ಊವಲು ಮತ್ತು ಲಕೆಂಬ, ಯಸಾವ ದ್ವೇಪಗಳ ಗುಂಪುಗಳಿವೆ. ಫೀಜಿ ದ್ವೀಪಸ್ತೊಮ ಮುಳುಗಡೆಯಾಗಿರುವ ಚಪ್ಪಟೆ ನೆಲದ ಮೇಲಿದ್ದು ಇಲ್ಲಿಯ ಭೂಪ್ರದೇಶ ವೈವಿಧ್ಯದಿಂದ ಕೂಡಿದೆ. ಇದರಲ್ಲಿಯ ದೊಡ್ಡ ದ್ವೀಪಗಳು ಅಗ್ನಿ ಪರ್ವತದಿಂದ ನಿರ್ಮಿತವಾಗಿದ್ದು ಸಣ್ಣ ದ್ವೀಪಗಳು ಹವಳದ ದಿಬ್ಬಗಳಿಂದ ನಿರ್ಮಿತವಾಗಿವೆ. ದ್ವೀಪಗಳ ಸುತ್ತಲೂ ಇರುವ ಹವಳದ ದಿಬ್ಬಗಳು ಹಡಗುಗಳಿಗೆ ಅಪಾಯಕಾರಿ. ಪಶ್ಚಿಮದ ವೀಟೀಲೆವು ಉತ್ತರದ ವನೂವ ಲೆವು ಅಗ್ನಿಪರ್ವತಗಳಿಂದ ಹೊರಬಂದ ವಸ್ತುಗಳಿಂದ ನಿರ್ಮಿತವಾಗಿವೆ. ಡ್ರೆಕೆಟಿ, ಸಿಗಾಟೋಕಿ, ರೀವಾ, ಬಾ ಮತ್ತು ನವುಅ. ಈ ದ್ವೀಪಗಳಲ್ಲಿ ಹರಿಯುವ ಮುಖ್ಯ ನದಿಗಳು. ವೀಟೇಲೆವುನಲ್ಲಿಯ ಅತ್ಯಂತ ಎತ್ತರದ ಸ್ಥಳ ಮೌಂಟ್ ಟೊಮಾನಿನಿ (1323 ಮೀ). ವನೂವ ಲೆವುನಲ್ಲಿಯ ಅತ್ಯಂತ ಎತ್ತರದ ಸ್ಥಳ ಮೌಂಟ್ ನಸೊರೊಲೆವು (1032 ಮೀ). ದ್ವೀಪಗಳಲ್ಲಿ ಅನೇಕ ನಿರ್ಜೀವ ಜ್ವಾಲಾಮುಖಿಗಳಿದ್ದು ಅವುಗಳಲ್ಲಿ ಪ್ರಸಿದ್ಧವಾದುದು ಜೋಸ್ಕಸ್ ಥಂಬ್.

	ಫೀಜಿ ದ್ವೀಪಸ್ತೋಮದಲ್ಲಿ ಉಷ್ಣವಲಯದ ಹವಾಗುಣವಿದೆ. ಇಲ್ಲಿಯ ಉಷ್ಣತೆ 16ಲಿಅ ನಿಂದ 32ಲಿಅ ವರೆಗೆ ಇರುತ್ತದೆ. ದ್ವೀಪಸ್ತೊಮ ಆಗ್ನೇಯ ವಾಣಿಜ್ಯ ಮಾರುತಗಳ ಹಾದಿಯಲ್ಲಿದ್ದು ವರ್ಷವಿಡೀ ತೇವಾಂಶವಿಂದ ಕೂಡಿರುತ್ತದೆ. ಹವಾಮಾನ ಡಿಸೆಂಬರಿನಿಂದ ಏಪ್ರಿಲ್ ತನಕ ಅತ್ಯಂತ ಬಿಸಿಯಾಗಿದ್ದು ಜೂನಿನಿಂದ ಸೆಪ್ಟೆಂಬರ್ ತನಕ ಅತ್ಯಂತ ತಂಪಾಗಿರುತ್ತದೆ. ಮಳೆ ಹೆಚ್ಚು. ಡಿಸೆಂಬರ್ ಮತ್ತು ಏಪ್ರಿಲ್ ತಿಂಗಳುಗಳ ನಡುವೆ ಈ ದ್ವೀಪಸ್ತೋಮ ಚಂಡ ಮಾರುತದ ಹಾವಳಿಗೆ ಸಿಕ್ಕುವ ಭಯವಿರುತ್ತದೆ. ಎರಡು ಮುಖ್ಯ ದ್ವೀಪಗಳ ಮಧ್ಯಪ್ರದೇಶದಲ್ಲಿ ವರ್ಷಕ್ಕೆ 304 ಸೆಂ.ಮೀ. ಗಳಿಗಿಂತ ಹೆಚ್ಚಾಗಿ ಮಳೆ ಬೀಳುವುದು. ಈ ಪ್ರದೇಶದಲ್ಲಿ ದಟ್ಟವಾದ ಕಾಡುಗಳಿವೆ. ಪಶ್ಚಿಮದಲ್ಲಿ ಒಳಸವನ್ನಾ ರೀತಿಯ ಹಲ್ಲುಗಾವಲಿದೆ. ಪೂರ್ವಭಾಗದ ತೀರಪ್ರದೇಶದಲ್ಲಿ ಮ್ಯಾಂಗ್ರೊವ್‍ಗಳಿಂದ ಕೂಡಿದ ಚೌಗು ಪ್ರದೇಶವಿದೆ. ತೆಂಗಿನ ತೋಪುಗಳೂ, ಬಾಳೆ ತೋಟಗಳೂ ಇದ್ದು ಸ್ಕ್ರೂ, ಪೈನ್ ಮತ್ತು ಆಲದ ಮರಗಳೂ ಇಲ್ಲಿ ಬೆಳೆಯುತ್ತವೆ. ಕಾಡಿನಲ್ಲಿ ಚೌಬೀನೆ ಮರಗಳಿವೆ. ಇಲ್ಲಿ ಪ್ರಾಣೀಗಳು ಕಡಿಮೆ. ಹಂದಿ, ಮಂಗೂಸ್, ಬಾವಲ್, ಮೈನಾ, ಬುಲ್‍ಬುಲ್, ಪಾರಿವಾಳ, ಗಿಣಿ ಮುಂತಾದವನ್ನು ಕಾಣಬಹುದು.

	ಈ ದ್ವೀಪಸ್ತೋಮದ ಜನಜೀವನ ವೈವಿಧ್ಯಮಯ, ಸ್ಥಳೀಯ ನಿವಾಸಿಗಳಾದ ಫೀಜಿಯನ್ನರು ಮೆಲನೇಷಿಯನ್ ಜನಾಂಗಕ್ಕೆ ಸೇರಿದ ಕ್ರಿಶ್ಚಿಯನ್ನರು, ಫೀಜಿಭಾಷೆ ಮಲಯೋಪಾಲಿನೇಷಿಯನ್ ಪಂಗಡಕ್ಕೆ ಸೇರಿದ್ದು. ಅದರಲ್ಲಿ ಅನೇಕ ಆಡುಭಾಷೆಗಳಿವೆ. 1879ರಲ್ಲಿ ಇಲ್ಲಿಗೆ ಕೆಲಸಮಾಡಲು ವಲಸೆ ಬಂದು ನೆಲಸಿರುವ ಇಂಡಿಯನ್ನರು ಫೀಜಿಯನ್ ಮೂಲನಿವಾಸಿಗಳಿಗಿಂತ ಹೆಚ್ಚಾಗಿದ್ದಾರೆ. ಇತ್ತೀಚೆಗೆ ತಾಂತ್ರಿಕ, ವಾಣಿಜ್ಯ ಹಾಗೂ ವೃತ್ತಿನಿರತ ಇಂಡಿಯನ್ನರೂ ಇಲ್ಲಿಗೆ ವಲಸೆ ಬಂದೆದ್ದಾರೆ. ಇಲ್ಲಿಯ ಇಂಡಿಯನ್ನರಲ್ಲಿ ಬಹುಪಾಲು ಹಿಂದುಗಳು. ಮುಸ್ಲಿಮರೂ ಇದ್ದಾರೆ. ಇವರಲ್ಲದೆ ಗ್ರೇಟ್ ಬ್ರಿಟನ್, ಆಸ್ಟ್ರೇಲಿಯ, ನ್ಯೂಜಿóಲೆಂಡುಗಳಿಂದ ಬಂದ ಯೂರೊಪಿಯನ್ನರೂ ಇಲ್ಲಿ ನೆಲಸಿದ್ದು ಅವರಲ್ಲಿ ಬ್ರಿಟಿಷರೇ ಹೆಚ್ಚಾಗಿದ್ದಾರೆ. ಇಲ್ಲಿರುವ ಇತರ ಮೂರು ಪ್ರಮುಖ ಪಂಗಡಗಳು ಚೀನಿಯರು, ಇತರ ಪೆಸಿಫಿಕ್ ದ್ವೀಪವಾಸಿಗಳು ಮತ್ತು ರೋಟುಮನ್ನರು.

	ಫೀಜಿ ದ್ವೀಪಸ್ತೋಮ ಪ್ರಮುಖವಾಗಿ ವ್ಯವಸಾಯದ ಮೇಲೆ ಅವಲಂಬಿತವಾಗಿದೆ. ಇದರ ಆರ್ಥಿಕ ಪರಿಸ್ಥಿತಿ ಇತರ ಅಭಿವೃದ್ಧಿಶೀಲ ರಾಷ್ಟ್ರಗಳಿಗಿಂತ ಉತ್ತಮವಾಗಿದೆ. ಮತ್ತಷ್ಟು ಆರ್ಥಿಕ ಪ್ರಗತಿಗೆ ಇಲ್ಲಿಯ ಬೆಳೆಗಳ ವೈವಿಧ್ಯ, ಕೈಗಾರಿಕೆಗಳ ಬೆಳವಣಿಗೆ ಮತ್ತು ಖನಿಜಗಳ ಪರಿಶೋಧನೆಯ ತೀವ್ರ ಅಗತ್ಯವಿದೆ. ಆದರೆ ಇಲ್ಲಿ ವ್ಯವಸಾಯದ ಅಭಿವೃದ್ಧಿಗೆ ಪ್ರಮುಖ ಅಡಚಣೆಯೆಂದರೆ ಭೂಹಿಡುವಳಿ ಪದ್ಧತಿ. ವ್ಯವಸಾಯಯೋಗ್ಯ ಭೂಮಿಯಲ್ಲಿ ಶೇಕಡಾ 80ಕ್ಕೂ ಹೆಚ್ಚು ಭಾಗ ಫೀಜಿಯನ್ನರಿಗೆ ಸೇರಿದ್ದು ಇಂಡಿಯನ್ನರು ಅದನ್ನು ಬಾಡಿಗೆಗೆ ಪಡೆಯುತ್ತಾರೆ. ಇಲ್ಲಿಂದ ರಫ್ತಾಗುವ ಮುಖ್ಯ ಪದಾರ್ಥಗಳೆಂದರೆ ಸಕ್ಕರೆ ಮತ್ತು ಕೊಬ್ಬರಿ. ಇತರ ವಸ್ತುಗಳು ಕೊಬ್ಬರಿ ಎಣ್ಣೆ, ಚಿನ್ನ, ಬಾಳೆಹಣ್ಣು, ಕಾಕಂಬಿ, ಮ್ಯಾಂಗನೀಸ್, ಬಿಸ್ಕತ್ತುಗಳೂ ಇತ್ಯಾದಿ. ಫೀಜಿಯ ವಿದೇಶಿ ಗ್ರಾಹಕರಲ್ಲಿ ಇಂಗ್ಲೆಂಡ್ ಮೊದಲನೆಯದಾಗಿದ್ದು ಅನಂತರ ಅಮೆರಿಕ, ಕೆನಡ, ಆಸ್ಟ್ರೇಲಿಯ ಮತ್ತು ನ್ಯೂಜಿóóಲೆಂಡ್‍ಗಳು ಬರುತ್ತವೆ. 1970ರಲ್ಲಿ ಫೀಜಿಯ ರಫ್ತು ಸುಮಾರು 54,000,000 ಡಾಲರುಗಳಿದ್ದರೆ ಆಮದು ಸುಮಾರು 79,000,000 ಡಾಲರುಗಳಷ್ಟಿತ್ತು. ಈ ಖೋತಾವನ್ನು ಪ್ರವಾಸೋದ್ಯಮ ಮತ್ತು ವಿದೇಶೀ ಬಂಡವಾಳಗಳಿಂದ ಸರಿದೂಗಿಸಲು ಸಾಧ್ಯವಾಗಿದೆ, 1970ರಲ್ಲಿ ಪ್ರವಾಸೋದ್ಯಮದಿಂದ ಬಂದ ಹಣ 21,000,00ಡಾಲರುಗಳಷ್ಟಿತ್ತು. ಇದಲ್ಲದೆ ಸರ್ಕಾರ ಹೊಸ ಕೈಗಾರಿಕೆಗಳಿಗೆ ಉತ್ತೇಜನ ನೀಡಲು ತೆರಿಗೆ ರಿಯಾಯಿತಿಗಳನ್ನು ನೀಡುತ್ತಿದೆ. ಆದರೆ ಸುಲಭ ದರದಲ್ಲಿ ವಿದ್ಯುತ್ ದೊರೆಯದೆ ಕೈಗಾರಿಕೆಗಳ ವಿಸ್ತರಣೆಗೆ ಅಡ್ಡಿಯಾಗಿದೆ. ಅದಲ್ಲದೆ ಬೇಸಾಯ, ಅರಣ್ಯ ಹಾಗೂ ಮೀನುಗಾರಿಕೆಯ ಅಬಿವೃದ್ಧಿಗೂ ಸರ್ಕಾರ ಗಮನಕೊಡುತ್ತದೆ. ಸರ್ಕಾರದ ಶೇಕಡಾ 80ರಷ್ಟು ಆದಾಯ ಆದಾಯತೆರಿಗೆಗಳು ಸುಂಕ, ಮತ್ತು ಇತರ ನೇರ ತೆರಿಗೆಗಳಿಂದ ಬರುತ್ತದೆ.

	ಫೀಜಿಯಲ್ಲಿಯ ಎರಡು ಪ್ರಮುಖ ಪ್ರವೇಶ ದ್ವಾರಗಳು ನಾಂದೀ ಅಂತರ ರಾಷ್ತ್ರೀಯ ವಿಮಾನ ನಿಲ್ದಾಣ ಮತ್ತು ಸೂವ ಬಂದರು. ನಾಂದೀ ವಿಮಾನ ನಿಲ್ದಾಣ ಹೊನೊಲುಲುವಿಗೆ 5100ಕಿಮೀ. ಸಿಡ್ನಿಗೆ 3200 ಕಿಮೀ. ಆಕ್ಲಾಂಡಿಗೆ 2000ಕಿ.ಮೀ ದೂರದಲ್ಲಿದ್ದು ವಿಮಾನಗಳ ಇಂಧನ ತುಂಬಲು ಹಾಗೂ ಪ್ರವಾಸಿಗಳು ಇಳಿಯಲು ಪ್ರಮುಖ ಕೇಂದ್ರವಾಗಿದೆ. ನಾಂದೀಯಿಂದ 271 ಕಿಮೀ ದೂರದಲ್ಲಿ ಸೂವದ ಪ್ರತ್ಯೇಕ ವಿಮಾನನಿಲ್ದಾಣವಿದೆ. ಸೂವ ಆಳನೀರಿನ ಬಂದರಾಗಿದ್ದು ಎಲ್ಲ ಬಗೆಯ ಹಡಗುಗಳ ನಿಲ್ದಾಣವಾಗಿದೆ. ವೀಟೀಲೆವು ಪಶ್ಚಿಮತೀರದ ಲಾಟೋಕ ಎಂಬಲ್ಲಿ ಮತ್ತೊಂದು ಬಂದರಿದೆ. ಫೀಜಿಯಲ್ಲಿ ಸರ್ವಋತು ರಸ್ತೆಗಳು ಕಡಿಮೆಯಿದ್ದು ಒಳಭಾಗಕ್ಕೆ ರಸ್ತೆ ಸೌಕರ್ಯ ಸಮರ್ಪಕವಾಗಿಲ್ಲ. ನದಿಗಳ ಮೂಲಕ ವ್ಯವಸಾಯೋತ್ಪನ್ನಗಳನ್ನು ಸಾಗಿಸಲಾಗುತ್ತದೆ.

	ಫೀಜಿ ಬ್ರಿಟಿಷ್ ಚಕ್ರಾಧಿಪತ್ಯದೊಳಗೆ ಸ್ವಾತಂತ್ಯ (1970) ಪಡೆದಿರುವ ಡೊಮೇನಿಯನ್ ಅಂತಸ್ತುಳ್ಳ ದೇಶವಾಗಿದೆ. ಬ್ರಿಟಿಷ್ ದೊರೆಯೇ ದೇಶದ ಪ್ರಮುಖನಾಗಿದ್ದು ಗವರ್ನರ್ ಜನರಲ್ ಬ್ರಿಟಿಷ್ ದೊರೆಯೇ ಪ್ರತಿನಿಧಿಸುತ್ತಾನೆ. ಇಲ್ಲಿಯ ಶಾಸನ ಸಭೆ ಎರಡು ಸದನಗಳಿಂದ ಕೂಡಿದೆ. ಮೇಲ್ಮನೆ ಸೆನೆಟ್ಟಿನಲ್ಲಿ 22 ಮಂದಿ ಸದಸ್ಯರಿದ್ದು ಅವರಲ್ಲಿ 7 ಮಂದಿ ಪ್ರಧಾನಮಂತ್ರಿಯಿಂದಲೂ 6 ಮಂದಿ ವಿರೋಧ ಪಕ್ಷದ ನಾಯಕರಿಂದಲೂ, 8 ಮಂದಿ ಗ್ರೇಟ್ ಕೌನ್ಸಿಲ್ ಆಫ್ ಚೀಪ್ಸ್ ನಿಂದಲೂ ಒಬ್ಬ ರೋಟುಮನ್ ಕೌನ್ಸಿಲ್‍ನಿಂದಲೂ ನಾಮಕರಣ ಹೊಂದುತ್ತಾರೆ. ಕೆಳಮನೆ ಪ್ರತಿನಿಧಿಸಭೆಯಲ್ಲಿ 52 ಮಂದಿ ಚುನಾಯಿತ ಸದಸ್ಯರಿರುತ್ತಾರೆ. 1876ರಲ್ಲಿ ಸ್ಥಾಪಿತವಾದ ಗ್ರೇಟ್ ಕೌನ್ಸಿಲ್ ಆಫ್ ಚೀಪ್ಸ ಫೀಜಿಯನ್ನರ ಕ್ಷೇಮಾಭಿವೃದ್ಧಿಯ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುತ್ತದೆ. ಫೀಜಿಯನ್ ವ್ಯವಹಾರಗಳ ಬೋರ್ಡ್ 14 ಪ್ರಾಂತ್ಯಗಳ ಆಡಳಿತದ ಹಾಗೂ ಭೂತೆರಿಗೆಯನ್ನು ವಿಧಿಸುವ ಜವಾಬ್ದಾರಿ ಹೊಂದಿದೆ. ಸ್ಥಳೀಯರಿಂದ ಆರಿಸಲ್ಪಟ್ಟ 15 ಫೀಜಿಯೇತರ ಸಲಹಾಮಂಡಲಿಗಳು 14 ಪ್ರಾಂತಿಯ ಮಂಡಲಿಗಳ ಸಹಕಾರದೊಂದಿಗೆ ಕೆಲಸ ಮಾಡುತ್ತವೆ. ಸೂವ, ಲಾಟೋಕ, ಬಾ, ನಾಂದೀ ಸಿಗಾಟೋಕ, ನೌಸೋರಿ, ಲಾಬಾಸ ಮತ್ತು ಸಾವುಸಾವು ಈ ನಗರಗಳ ಆಡಳಿತ ನಗರ ಮಂಡಲಿಗಳಿಗೆ ಸೇರಿದ್ದು.

	ಫೀಜಿ ದೇಶ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲೆಲ್ಲ ಆರೋಗ್ಯಕರವಾಗಿದೆ. ಇಲ್ಲಿ ಉಷ್ಣವಲಯದ ಕಾಯಿಲೆಗಳನ್ನು ನಿರ್ಮೂಲಗೊಳಿಸಲಾಗಿದೆ. ಉಪಾಧ್ಯಾಯರ ಕೊರತೆಯಿದ್ದರೂ ವಿದ್ಯಾಭ್ಯಾಸ ಸಾಕಷ್ಟು ಪ್ರಗತಿ ಹೊಂದಿದ್ದು ಶಾಲೆಗೆ ಹೋಗುವ ವಯಸ್ಸಿನ ಮಕ್ಕಳಲ್ಲಿ ಶೇಕಡಾ 86ರಷ್ಟು ಮಂದಿ ಶಾಲೆಗೆ ಹೋಗುತ್ತಾರೆ. ಫೀಜಿ ದ್ವೀಪಸ್ತೋಮ ಮತ್ತು ಪೆಸಿಫಿಕ್ ಸಾಗರದ ನೂರಾರು ದ್ವೀಪಗಳ ವಿದ್ಯಾರ್ಥಿಗಳಿಗೆ ಸದ್ಯಕ್ಕೆ ಇರುವುದು ಸೂವದಲ್ಲಿರುವ ಸೌತ್ ಪೆಸಿಫಿಕ್ ವಿಶ್ವವಿದ್ಯಾಲಯ ಒಂದೇ.

	ಫೀಜಿಯನ್ನರು ಮೆಣಸಿನ ಗಿಡದ ಬೇರಿನಿಂದ ತಯಾರಿಸಿದ ಯಾಕೋನ-ಕಾವಾ ಎಂಬ ಪಾನೀಯವನ್ನು ಸ್ನೇಹಪೂರ್ವಕ ಕುರುಹಾಗಿ ಅತಿಥಿಗಳಿಗೆ ನೀಡುತ್ತಾರೆ. ಜನಪದ ನೃತ್ಯಕಾರರು ಉಪ್ಪು ನೇರಳೆ ಗಿಡದ ತೊಗಟೆಯಿಂದ ತಯಾರಿಸಿಲಾಗುವ ಟಾಪಾಮುಸಿ ಎಂಬ ಉಡುಪನ್ನು ಧರಿಸುತ್ತಾರೆ. ಇಲ್ಲಿಯ ಸಾಂಪ್ರದಾಯಿಕ ಕಲೆಗಳೆಂದರೆ ಮರಗಳಲ್ಲಿಯ ಕೆತ್ತನೆಕೆಲಸ, ಕಲಾತ್ಮಕ ಮಡಿಕೆಗಳ ಈಚಲುಚಾಪೆಗಳ ಮತ್ತು ಟಾಪಾಮುಸಿ ಉಡುಪಿನ ತಯಾರಿಕೆ. ಬೆಕಾ ದ್ವೀಪದ ಜನರು ಬರಿಯ ಕಾಲಿನಲ್ಲಿ ಬೆಂಕಿಯ ಮೇಲೆ ನಡೆಯುತ್ತಾರೆ. ಇಲ್ಲಿಯ ಇಂಡಿಯನ್ ಜನಾಂಗ ಭಾರತೀಯ ಸಂಸ್ಕøತಿಯನ್ನು ಉಳಿಸಿಕೊಂಡಿದ್ದು ದೀಪಾವಳಿಯೇ ಮೊದಲಾದ ಭಾರತೀಯ ಹಬ್ಬಗಳನ್ನು ಆಚರಿಸುತ್ತಿದೆ. ಸೂವದಲ್ಲಿ ಸೆಪ್ಪೆಂಬರ್‍ನಲ್ಲಿ ನಡೆಯುವ ವಿಹಾರೋತ್ಸವವಾದ ಹೈಬಿಸ್ಕಸ್ ಹಬ್ಬ ಪ್ರಮುಖ ಹಬ್ಬ ಎಲ್ಲ ಜನಾಂಗಗಳವರೂ ಇದನ್ನು ಆಚರಿಸುತ್ತಾರೆ.

	ಫೀಜಿ ದ್ವೀಪಸ್ತೋಮವನ್ನು ಡಚ್ ನಾವಿಕನಾದ ಅಬೆಲ್ ಟಾಸ್ಮನ್ 1643ರಲ್ಲಿ ಪತ್ತೆಹಚ್ಚಿದ. 1774ರಲ್ಲಿ ಇಲ್ಲಿಗೆ ಭೇಟಿಕೊಟ್ಟ ಕ್ಯಾಪ್ಟನ್ ಕುಕ್ ಇಲ್ಲಿಯ ವಟೋವಾ ದ್ವೀಪವನ್ನು ಕಂಡು ಹಿಡಿದ. ಅನಂತರ 1789ರಲ್ಲಿ ಲೆ. ವಿಲಿಯಮ್ ಬ್ಲೈ ಎಂಬಾತನು ವೀಟೇಲೆವು, ಕೊರೊ, ಯಸಾವ ಮೊದಲಾದ ದ್ವೀಪಗಳನ್ನು ಶೋಧಿಸಿದ. 1800ರಲ್ಲಿ ಸುಮಾರಿಗೆ ಆಸ್ಟ್ರೇಲಿಯಾದ ತಲೆತಪ್ಪಿಸಿಕೊಂಡ ಅಪರಾಧಿಗಳು ಇಲ್ಲಿಗೆ ಭೇಟಿಕೊಡುತ್ತದ್ದರು. 19ನೆಯ ಶತಮಾನದ ಮೊದಲ ಭಾಗÀದಲ್ಲಿ ಗಂಧದ ಮರದ ವ್ಯಾಪಾರ ಅಮೆರಿಕನ್ ಹಾಗೂ ಈಸ್ಟ್ ಇಂಡಿಯಾ ಕಂಪನಿಯ ಹಡಗುಗಳನ್ನು ಇಲ್ಲಿಗೆ ಆಕರ್ಷಿಸಿತು. ಆನಂತರ ವ್ಯಾಪಾರಿಗಳು ಧರ್ಮ ಪ್ರಚಾರಕರು ಇಲ್ಲಿಗೆ ಬಂದು ನೆಲಸಿದರು. 1858ರಲ್ಲಿ ಅಮೆರಿಕದೊಡನೆ ಕಲಹದ ಕಾರಣ ಸ್ಥಳೀಯ ದೊರೆ ಈ ದ್ವೀಪಗಳನ್ನು ಬ್ರಿಟಿಷರಿಗೆ ಒಪ್ಪಸಿದ. 1874. ಅಕ್ಟೋಬರ್ 10ರಂದು ಫೀಜಿಯನ್ನು ಬ್ರಿಟಿಷ್ ವಸಾಹತೆಂದು ಘೋಷಿಸಲಾಯಿತು. 1881ರಲ್ಲಿ ರೋಟುಮಾದ್ವೀಪವನ್ನು ಬ್ರಿಟಿಷರು ವಶಪಡಿಸಿಕೊಂಡರು. ಫೀಜಿ 1970 ಅಕ್ಟೋಬರ್ 10ರಂದು ಸ್ವತಂತ್ರವಾಯಿತು.

	ಫೀಜಿ ದ್ವೀಪಸ್ತೋಮದ ರಾಜಧಾನಿ ಸೂವ ಆ ದ್ವೀಪಸ್ತೋಮದಲ್ಲೇ ದೊಡ್ಡ ಬಂದರು ನಗರ. ಜನಸಂಖ್ಯೆ 63,622 (1976). ಹತ್ತಿರದಲ್ಲೆ ವಿಮಾನ ನಿಲ್ದಾಣವಿದ್ದು ಇದೊಂದು ಉತ್ತಮ ಬಂದರೂ ಆಗಿದೆ. ಶಾಲಾ ಕಾಲೇಜುಗಳೂ ಸೌತ್ ಪೆಸಿಫಿಕ್ ವಿಶ್ವವಿದ್ಯಾಲಯವೂ ಇಲ್ಲಿದೆ.

	ಆರ್ಥಿಕವಾಗಿ ಫೀಜಿ ಇತರ ಅಭಿವೃದ್ಧಿಶೀಲ ರಾಷ್ಟ್ರಗಳಿಗಿಂತ ಉತ್ತಮ ಸ್ಥಿತಿಯಲ್ಲಿದೆ. ಆರ್ಥಿಕತೆಯನ್ನು ವೈವಿಧ್ಯಗೊಳಿಸಲು ಹಾಗೂ ದೇಶದ ಖನಿಜ ಸಂಪತ್ತನ್ನು ಹಾಗೂ ಇತರ ಸಂಪನ್ಮೂಲಗಳನ್ನು ಅಭಿವೃದ್ಧಿಗೊಳಿಸಲು ಇಲ್ಲಿಯ ಸರ್ಕಾರ ವಿದೇಶಿ ಬಂಡಾವಾಳವನ್ನು ಆಕರ್ಷಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ.
(ಜೆ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ